ಅರ್ಥವುಳ್ಳವರೆಲ್ಲ ಅರಸಿಂಗಂಜುವರಯ್ಯಾ

ಅರ್ಥವುಳ್ಳವರೆಲ್ಲ ಅರಸಿಂಗಂಜುವರಯ್ಯಾ,
ಭಕ್ತಿಯುಳ್ಳವರೆಲ್ಲ ಜಂಗಮಕ್ಕಂಜುವರಯ್ಯಾ,
ಸೂಳೆಗೊಲಿದವರೆಲ್ಲ ಸೂಳೆಯೆಂಜಲು ತಿಂಬರಯ್ಯಾ.
ಮಾಂಸವ ಮಚ್ಚಿದವರೆಲ್ಲ ಸೊಣಗನೆಂಜಲ ತಿಂಬರಯ್ಯಾ.
ಕೂಡಲಸಂಗನ ಶರಣರ ಒಕ್ಕುಮಿಕ್ಕುದ ಲಿಂಗಕ್ಕೆ ಕೊಟ್ಟುಕೊಂಡು
ಯೋಗ್ಯವಾದವರ ನಮ್ಮ ಚಿಕ್ಕ ಬಸವಣ್ಣ ಬಲ್ಲ.

Leave a Comment

Your email address will not be published. Required fields are marked *