ಅರ್ಥರೇಖೆುದ್ದಲ್ಲಿ ಫಲವೇನು

ಅರ್ಥರೇಖೆುದ್ದಲ್ಲಿ ಫಲವೇನು, ಆಯುಷ್ಯರೇಖೆ ಇಲ್ಲದನ್ನಕ್ಕರ
ಹಂದೆಯ ಕೈಯಲ್ಲಿ ಚಂದ್ರಾಯುಧವಿದ್ದಲ್ಲಿ ಫಲವೇನು ಅಂಧಕನ
ಕೈಯಲ್ಲಿ ದರ್ಪಣವಿದ್ದು ಫಲವೇನು ಮರ್ಕಟನ ಕೈಯಲ್ಲಿ ಮಾಣಿಕವಿದ್ದು
ಫಲವೇನು ನಮ್ಮ ಕೂಡಲಸಂಗನ ಶರಣರನರಿಯದವರ ಕೈಯಲ್ಲಿ ಲಿಂಗವಿದ್ದು
ಫಲವೇನು ! ಶಿವಪಥವನರಿಯದನ್ನಕ್ಕ.

Leave a Comment

Your email address will not be published. Required fields are marked *