ಅಂಗವ ಲಿಂಗಮುಖದಲ್ಲಿ ಅರ್ಪಿಸಿ,
ಅಂಗ ಅನಂಗವಾಯಿತ್ತು.
ಮನವ ಅರಿವಿಂಗರ್ಪಿಸಿ, ಮನ ಲಯವಾಯಿತ್ತು.
ಭಾವವ ತೃಪ್ತಿಗರ್ಪಿಸಿ, ಭಾವ ಬಯಲಾಯಿತ್ತು.
ಅಂಗ ಮನ ಭಾವವಳಿದ ಕಾರಣ
ಕಾಯ ಅಕಾಯವಾಯಿತ್ತು.
ಎನ್ನ ಕಾಯದ ಸುಖಭೋಗವ ಲಿಂಗವೆ ಭೋಗಿಸುವನಾಗಿ,
ಶರಣಸತಿ ಲಿಂಗಪತಿಯಾದೆನು.
ಇದು ಕಾರಣ, ಚೆನ್ನಮಲ್ಲಿಕಾರ್ಜುನನೆಂಬ ಗಂಡನಒಳಹೊಕ್ಕು ಬೆರಸಿದೆನು.