ಹಸೆ ಹಂದರವನಿಕ್ಕಿ, ತೊಂಡಿಲ ಬಾಸಿಗವ ಕಟ್ಟಿ,
ಮದುವೆಯಾದೆನಲ್ಲಾ ನಾನು
ಮಚ್ಚಿ ಮದುವೆಯಾದೆನಲ್ಲಾ ನಾನು.
ಗಂಡನೆ, ನಿನಗೋತು ಕೈವಿಡಿದವಳನು
ಮತ್ತೊಬ್ಬರು ಕೈವಿಡಿದರೆ
ನಿನ್ನಭಿಮಾನವ ಪರರೆಳದೊಯಿದಂತೆ ಕಾಣಾ ಚೆನ್ನಮಲ್ಲಿಕಾರ್ಜುನಾ.
ಹಸೆ ಹಂದರವನಿಕ್ಕಿ, ತೊಂಡಿಲ ಬಾಸಿಗವ ಕಟ್ಟಿ,
ಮದುವೆಯಾದೆನಲ್ಲಾ ನಾನು
ಮಚ್ಚಿ ಮದುವೆಯಾದೆನಲ್ಲಾ ನಾನು.
ಗಂಡನೆ, ನಿನಗೋತು ಕೈವಿಡಿದವಳನು
ಮತ್ತೊಬ್ಬರು ಕೈವಿಡಿದರೆ
ನಿನ್ನಭಿಮಾನವ ಪರರೆಳದೊಯಿದಂತೆ ಕಾಣಾ ಚೆನ್ನಮಲ್ಲಿಕಾರ್ಜುನಾ.