ಸುಳ್ಳು ಪೇಳುವೆ ನಿಮಗೆ

ಸುಳ್ಳು ಪೇಳುವೆ ನಿಮಗೆ
ಸುಳ್ಳು ನಮ್ಮನೆ ದೈವ
ಕಳ್ಳನ ಬಂಟರು ನಮಗೆ ಕಡೆ ಮೊದಲಿಲ್ಲಾ

ನಾಮವಿಲ್ಲದೆ ಬೂದಿ ನೇಮ ಮಾಡೋದು ಸುಳ್ಳು
ನಾಮವೆಂಬುದೆ ಬುದ್ಧಿ ಮಿಕ್ಕವೆಲ್ಲ ಸುಳ್ಳು ||1||

ಒಂದು ಅಹುದು ಎರಡು ಎಂದೆಂದಿಗೆ ಸುಳ್ಳು
ಮುಂದರಿದು ನೋಡು ಯಿಂಥ ಅಂದವೆಲ್ಲ ಸುಳ್ಳು ||2||

ಸೃಷ್ಟಿಯ ಮತ್ತೊಬ್ಬ ಪುಟ್ಟಿಸುವುದೆ ಸುಳ್ಳು
ಧಿಟ್ಟ ವಿಜಯವಿಠ್ಠಲನಲ್ಲದೆ ಶ್ರೇಷ್ಠನೆಂಬುವರು ಸುಳ್ಳು||3||

Leave a Comment

Your email address will not be published. Required fields are marked *