ಸಾಮಜ ವರದಗೆ

ಸಾಮಜ ವರದಗೆ
ಮಾಮನೋಹರಗೆ
ಕಾಮನ ಪಿತ ಶಾಮವರ್ಣ ಶ್ರೀಹರಿಗೆ
ವಾಮದೇವನ ಸಖ ಸೋಮವದನ ಹರಿಗೆ
ಕಾಮಿನಿ ಸತ್ಯಭಾಮ ಪತಿಗೆ ಹೊಸ
ಹೇಮದಾರುತಿಯ ಬೆಳಗಿರೆ ||1||

ಲಕ್ಷ್ಮೀಯ ಅರಸಗೆ ಪಕ್ಷಿವಾಹನಗೆ
ಮೋಕ್ಷದಾಯಕ ಪಾಂಡವ ಪಕ್ಷ ಶ್ರೀಹರಿಗೆ
ವಕ್ಷಸ್ಥಳದಿ ಲಕ್ಷ್ಮೀಯ ಪೊರೆವ
ಕುಕ್ಷಿವಳಗೆ ಜಗವ ರಕ್ಷಿಸುವ ಹರಿಗೆ
ಲಕ್ಷದಾರತಿಯ ಬೆಳಗಿರೆ ||2||

ಆಗಮವೇದ್ಯಗೆ ಭೋಗಿ ಶಯನಗೆ
ಬೇಗದಿಂದಲಿ ಭಕ್ತರ ಪೊರೆವಗೆ
ವಾಗೀಶವಂದ್ಯ ಶ್ರೀ ಗುರು ವಿಜಯವಿಠ್ಠಲ
ಮಂಗಳ ಮಹಿಮ
ತುಂಗ ಚರಿತ ಹರಿಗೆ ಮಂಗಳಾರುತಿಯ ಬೆಳಗಿರೆ ||3||

Leave a Comment

Your email address will not be published. Required fields are marked *