ಶುಭಕರ ಸುಂದರ ನಿನ್ನ ದರುಶನ
ಶೋಭಿಸುತಿದೆ ಕರುಣಾರುಣ ವದನ||
ನಾನಾ ಭಾವ ಸುಧಾರ್ಣವ ನೀನು
ನಾನಾ ಯೋಗ ಸಮಾಗಮ ನೀನು||
ಕಮಲಾನನ ಕಮಲದಳನಯನ
ಕಲಿಮಲಹರಣ ಸಿರಿ ರಾಮಕೃಷ್ಣ
ರಸಮಯ ನಿನ್ನ ಸುಮಧುರ ವಚನ
ಮನ ತಣಿಸುವ ಮಲಯಾಚಲ ಪವನ
ರಾಮಕೃಷ್ಣ ಜಯ ಜಯ ಧ್ವನಿ ತಾನ
ಪ್ರೇಮಾನಂದ ಮನೋಹರ ಗಾನ||
ಶುಭಕರ ಸುಂದರ ನಿನ್ನ ದರುಶನ
ಶೋಭಿಸುತಿದೆ ಕರುಣಾರುಣ ವದನ||
ನಾನಾ ಭಾವ ಸುಧಾರ್ಣವ ನೀನು
ನಾನಾ ಯೋಗ ಸಮಾಗಮ ನೀನು||
ಕಮಲಾನನ ಕಮಲದಳನಯನ
ಕಲಿಮಲಹರಣ ಸಿರಿ ರಾಮಕೃಷ್ಣ
ರಸಮಯ ನಿನ್ನ ಸುಮಧುರ ವಚನ
ಮನ ತಣಿಸುವ ಮಲಯಾಚಲ ಪವನ
ರಾಮಕೃಷ್ಣ ಜಯ ಜಯ ಧ್ವನಿ ತಾನ
ಪ್ರೇಮಾನಂದ ಮನೋಹರ ಗಾನ||