ಶಿವ ನಿನ್ನ ಪಾದವ ನಂಬಿದೆ

ಶಿವ ನಿನ್ನ ಪಾದವ ನಂಬಿದೆ| ಎನ್ನ
ಕಾಯುವ ಭಾರವು ನಿನ್ನದು ಎಂದೆ||

ನಾನೆಂಬ ಮಮಕಾರದಿಂದೆ| ನಾನಾ
ಜನ್ಮವ ತಿರುಗಿ ನಾ ಬಂದೆ|
ಗತಿ ಯಾವುದೆನಗಿನ್ನು ತೋರದು ಮುಂದೆ
ದೀನರಕ್ಷಕನಯ್ಯೋ ಬಾರಯ್ಯ ತಂದೆ||

ಭಕುತರ ಬಂಟ ನೀನಂತೆ| ಮುನ್ನ
ಬಾಣನ ಬಾಗಿಲ ಕಾಯ್ದವನಂತೆ|
ಫಾಲಲೋಚನ ನಿನ್ನ ಭಜಿಸಿದ ಉಪಮನ್ಯು
ಕ್ಷೀರವಾರಿಧಿಯಿತ್ತು ಸಲಹಿದೆ ತಂದೆ||

Leave a Comment

Your email address will not be published. Required fields are marked *