ವೆಂಕಟಾಚಲನಿಲಯಂ ಸ್ವಾಮಿ

ವೆಂಕಟಾಚಲನಿಲಯಂ ಸ್ವಾಮಿ
ವೈಕುಂಠಪುರವಾಸಮ್
ಪಂಕಜನೇತ್ರಂ ಪರಮಪವಿತ್ರಂ
ಶಂಖಚಕ್ರಧರ-ಚಿನ್ಮಯರೂಪಮ್||

ಅಂಬುಜೋದ್ಭವವಿನುತಂ ಸ್ವಾಮಿ
ಅಗಣಿತಗುಣನಾಮಮ್
ತುಂಬುರುನಾರದ ಗಾನವಿಲೋಲಮ್
ಅಂಬುಧಿಶಯನಂ ಆತ್ಮಾಭಿರಾಮಮ್||

ಪಾಹಿ ಪಾಂಡವಪಕ್ಷಂ ಸ್ವಾಮಿ
ಕೌರವಮದಹರಣಮ್
ಬಹು-ಪರಾಕ್ರಮಿ-ಫಣಿಮದಭಂಗಮ್
ಅಹಲ್ಯಾಶಾಪ ಭಯನಾಶಮ್||

ಸಕಲವೇದ ವಿಚಾರಂ ವರ-
ಸಾಧುಜನ ಪರಿಪಾಲಮ್
ಮಕರಕುಂಡಲಧರ-ಮದನಗೋಪಾಲಮ್
ಭಕ್ತವತ್ಸಲಂ ಪುರಂದರವಿಟ್ಠಲಮ್||

—-ಪುರಂದರದಾಸ

Leave a Comment

Your email address will not be published. Required fields are marked *