ವಾತನ್ನ ಜಯಾಜಾತನ್ನ

ವಾತನ್ನ ಜಯಾಜಾತನ್ನ ಲೋಕ-
ಪ್ರೀತನ್ನ ಸ್ತುತಿಸಿ ಖ್ಯಾತನ್ನ

ವಿಷವ ನುಂಗಿದ ಮಹಾಶೌರ್ಯನ್ನ ನಿತ್ಯ
ಅಸಮ ಸುಂದರ ಮತಿಧಾರ್ಯನ್ನ
ನಿಶಾಚರ ಕುಲದೋಷ ಸೂರ್ಯನ್ನ ಆರಾ
ಧಿಸುವ ಭಕ್ತರ ಸುಕಾರ್ಯನ್ನ ||1||

ವಾನರ ಕುಲದೊಳು ಧೈರ್ಯನ್ನ ಮುದ್ದು
ಆನನ ಗೀರ್ವಾಣವರ್ಯನ್ನ
ಆನಂದ ವಿe್ಞÁನ ಚರ್ಯನ್ನ ದುಷ್ಟ –
ದಾನವರಳಿದತಿ ವೀರ್ಯನ್ನ ||2||

ದ್ವಿಜರಾಜ ಕುಲಾಗ್ರಣಿ ಭೀಮನ್ನ ಮಹ
ದ್ವಿಜಕೇತ ನಂಘ್ರಿಗೆ ಪ್ರೇಮನ್ನ
ದ್ವಿಜರ ಪಾಲಿಸಿದ ನಿಸ್ಸೀಮನ್ನ ಕುರು
ವ್ರಜವ ಸದೆದ ಸಾರ್ವಭೌಮನ್ನ||3||

ಅದ್ವೈತ ಮತ ಕೋಲಾಹ ಲನ್ನ ವೇದ
ಸಿದ್ಧಾಂತ ಶುಭಗುಣ ಶೀಲನ್ನ
ಸದ್ವೈಷ್ಣವರನ್ನು ಪಾಲನ್ನ ಗುರು
ಮಧ್ವಮುನಿ ಗುಣಲೋಲನ್ನ ||4||

ಚಾರುಚರಿತ ನಿರ್ದೋಷನ್ನ ಲೋಕ
ಮೂರರೊಳಗೆ ಪ್ರಕಾಶನ್ನ
ಧೀರ ವಿಜಯವಿಠ್ಠಲೇಶನ್ನ ಬಿಡದೆ
ಆರಾಧಿಪ ಭಾರತೀಶನ್ನ ||5||

Leave a Comment

Your email address will not be published. Required fields are marked *