ವಟವೃಕ್ಷದೊಳಡಗಿದ ಸಮರಸ ಬೀಜ

ವಟವೃಕ್ಷದೊಳಡಗಿದ ಸಮರಸ ಬೀಜ
ಬಿsನ್ನಭಾವಕ್ಕೆ ಬಪ್ಪುದೆ ?
ಕಂಗಳ ನೋಟ, ಕರುವಿಟ್ಟ ಮನದ ಸೊಗಸು
ಅನಂಗನ ದಾಳಿಯ ಗೆಲಿದವು ಕಾಣಾ.
ಈ ಮರೀಚಿಕಾಜಲದೊಳಡಗಿದ ಪ್ರಾಣಿ
ವ್ಯಾಧನ ಬಲೆಗೆ ಸಿಲುಕುವುದೆ ?
ನಿನ್ನ ಕೈವಶಕ್ಕೆ ಸಿಕ್ಕಿಹಳೆಂಬುದ ಮರೆಯಾ ಮರುಳೆ.
ಚೆನ್ನಮಲ್ಲಿಕಾರ್ಜುನನಲ್ಲದೆ ಪರಪುರುಷ ನಮಗಾಗದ ಮೋರೆ ನೋಡಣ್ಣಾ.

Leave a Comment

Your email address will not be published. Required fields are marked *