ಲಾಲಿ ಪಾವನ ಚರಣ ಲಾಲಿ ಅಘಹರಣಲಾಲಿ ವೆಂಕಟರಮಣ ಲಲಿತ ಕಲ್ಯಾಣ
ವನಜಾಕ್ಷ ಮಾಧವ ವಸುದೇವ ತನಯಸನಕಾದಿ ಮುನಿವಂದ್ಯ ಸಾಧುಜನಪ್ರಿಯಇನ ಕೋಟಿಶತತೇಜ ಮುನಿಕಲ್ಪ ಭೂಜಕನಕಾದ್ರಿನಿಲಯ ವೆಂಕಟರಾಯ ಜೀಯ ||1||
ಜಗದೇಕನಾಯಕ ಜಲಜದಳನೇತ್ರಖಗರಾಜವಾಹನ ಕಲ್ಯಾಣ ಚರಿತಸಗರತನಯಾರ್ಚಿತ ಸನಕಾದಿ ವಿನುತರಘುವಂಶ ಕುಲತಿಲಕ ರಮಣೀಯ ಗಾತ್ರ||2||
ನಂದಗೋಪ ಕುಮಾರ ನವನೀತ ಚೋರಮಂದಾಕಿನೀ ಜನಕ ಮೋಹನಾಕಾರಇಂದುಧರ ಸತಿ ವಿನುತ ವಿಶ್ವಸಂಚಾರನಂದ ಗೋವಿಂದ ಮುಚುಕುಂದ ನುತಸಾರ ||3||
ಪಕ್ಷಿವಾಹನ ವಿಷ್ಣು ಪಾಹಿ ಪರಮೇಶರಕ್ಷ ಕೌಸ್ತುಭಭೂಷ ವೈಕುಂಠವಾಸಅಕ್ಷಯ ಫಲದಾತ ಅಖಿಳ ಲೋಕೇಶಲಕ್ಷಣ ಪರಿಪೂರ್ಣ ಲಕ್ಷ್ಮೀ ಪ್ರಾಣೇಶ||4||
ನರಮೃಗಾಕಾರಿ ಹಿರಣ್ಯಕ ವೈರಿಕರಿರಾಜ ರಕ್ಷಕ ಕಾರುಣ್ಯಮೂರ್ತಿಹರಿ ಆದಿಕೇಶವ ಗುರು ಅಪ್ರಮೇಯಸಿರಿಧರ ಶೇಷಗಿರಿ ವರ ತಿಮ್ಮರಾಯ ||5||