ರಾಜವದನೆ ಸುರರಾಜನ ಪುರದೊಳು

ರಾಜವದನೆ ಸುರರಾಜನ ಪುರದೊಳುರಾಜಿಸುತಿಹ ಕುಜವ
ರಾಜೀವ ಮುಖಿಯೆನಿಸುವ ಸಖಿಗೊಲಿದಿತ್ತರಾಜನ ತೋರೆನಗೆ

ನೆತ್ತಿಯಿಂದಿಳಿದಳ ಹೆತ್ತ ಮಗನ ಮೊಮ್ಮನೆತ್ತಿದಾತನ ಪಿತನ ತುತ್ತು ಮಾಡುವನ ವೈರಿಯನೇರಿ ಜಗವನು ಸುತ್ತು ಬರುತಲಿಪ್ಪನಕತ್ತಲೆಯೊಳು ಕಾದಿ ಅಳಿದಯ್ಯನ ಶಿರವಕತ್ತರಿಸಿದ ಧೀರನಸತ್ತ ಮಗನ ತಂದಿತ್ತವನನು ಎ-ನ್ನೊತ್ತಿಗೆ ಕರೆದು ತಾರೆ ||1||

ವರುಷವೈದರ ಪೆಸರವನ ತಾಯನುಜನಧರಿಸಿದಾತನ ಸಖನಧುರದೊಳು ತನಗೆ ಬೆಂಬಲ ಮಾಡಿಕೊಂಡು ಭೂವರಗೆ ತಾನೊಲಿದವನಸುರಗಿರಿಯನು ಸುತ್ತಿ ಬಾಹನ ಸುತನ ಕೈಯಲಿಹರಸಿ ದಾನವ ಕೊಂಡನಧರಣಿಜಾತನ ಶಿರವರಿದು ನಾರಿಯರನುಪುರಕೆ ತಂದವನ ತೋರೆ ||2||

ಹನ್ನೆರಡನೆಯ ತಾರೆಯ ಪೆಸರಾಕೆಯಕನ್ನೆಯಯ್ಯನ ಮನೆಯತನ್ನ ತಾ ಮರೆ ಮಾಡಿಕೊಂಡಿಪ್ಪರಸಿಯಬಣ್ಣವ ಕಾಯ್ದಿಹನಪನ್ನಗಶಯನ ಬೇಲಾಪುರದರಸನುತನ್ನ ನೆನೆವ ಭಕ್ತನಮನ್ನಿಸಿ ಕಾಯುವ ಚೆನ್ನಾದಿಕೇಶವ ಪ್ರ-ಸನ್ನನ ತೋರೆನಗೆ ||3||

Leave a Comment

Your email address will not be published. Required fields are marked *