ಭಾರತೀ ಜನನಿ ಪಾಲಿಸು ನಿತ್ಯ ಮಾರುತನ ರಾಣಿ

ಭಾರತೀ ಜನನಿ ಪಾಲಿಸು ನಿತ್ಯ ಮಾರುತನ ರಾಣಿ |
ಭಾರಿ ಭಾರಿಗೆ ಎನ್ನ ಭಾರ ನಿನ್ನದೇ ವಾಣೀ

ಭಕುತಿ ಇಲ್ಲದೇ ಅನುದಿನ |
ಅಕಟನಿಲ್ಲದೆ |
ಸಕಲ ಠಾವಿನಲ್ಲಿ ಅರ್ಭಕನಾಗಿ ತಿರುಗಿ ಪಾ |
ಪಕೆ ಎರಗಿದೆ ಯಾತಕೆ ಬಾರದವನಾದೆ ||1||

ಆರನ್ನ ಕಾಣದೆ ನಿನ್ನನು ನಾ |
ಸಾರಿದೆ ಮಾಣದೆ |
ವಾರ ವಾರಕೆನ್ನ ಉದ್ಧಾರವ ಮಾಳ್ಪುದು |
ಕಾರುಣ್ಯದಿಂದಲಿ ಶೃಂಗಾರವಾರಿಧಿ ವೇಗ ||2||

ನುತಿಸಿ ವಂದನೆ ಮಾಡುವೆ ನಿತ್ಯ |
ಕೃತಿಯನಂದನೆ |
ಸತತ ವಿಜಯವಿಠ್ಠಲನ ಪದಾಬ್ಜದಿ |
ರತಿ ಆಗುವಂತೆ ಸುಮತಿಯನು ಕರುಣಿಸೇ ||3||

Leave a Comment

Your email address will not be published. Required fields are marked *