ಭಜಿಸಿ ಬದುಕೆಲೊ ಮಾನವ
ಅಜ ಭವೇಂದ್ರಾದಿಗಳು ವಂದಿಸುವ ಪಾದವನು
ಪಾಕಶಾಸನಗೊಲಿದು ಬಲಿಯ ಮೆಟ್ಟಿದ ಪಾದ ಕಾಕು ಶಕಟನ ಒದ್ದು ಕೊಂದ ಪಾದನಾಕ ಭೀಕರ ಬಕನ ಮೆಟ್ಟಿ ಸೀಳಿದ ಪಾದಲೋಕ ಪಾವನ ಗಂಗೆ ಪುಟ್ಟಿದ ಪಾದವನು ||1||
ಶಿಲೆಯ ಸತಿಯಳ ಬಂಧವಿಮುಕ್ತಿಗೊಳಿಸಿದ ಪಾದಒಲಿದು ಪಾರ್ಥನ ರಥವನೊತ್ತಿದ ಪಾದಕಲಿ ಸುಯೋಧನನ ಓಲಗದಿ ಕೆಡಹಿದ ಪಾದಕಲಕಿ ಕಾಳಿಂಗನ ಪೆಡೆ ತುಳಿದ ಪಾದವನು ||2||
ಗರುಡ ಶೇಷಾದಿಗಳು ಬಿಡದೆ ಪೊತ್ತಿಹ ಪಾದಧರೆಯನೀರಡಿ ಮಾಡಿ ಅಳೆದ ಪಾದಸಿರಿ ತನ್ನ ತೊಡೆಯ ಮೇಲಿರಿಸಿ ಒತ್ತುವ ಪಾದವರ ಕಾಗಿನೆಲೆಯಾದಿಕೇಶವನ ಪಾದವನು ||3||