ಬಲ್ಲಿದ ಹಗೆಯವ ತೆಗೆವನ್ನಬರ,

ಬಲ್ಲಿದ ಹಗೆಯವ ತೆಗೆವನ್ನಬರ,
ಬಡವರ ಹರಣ ಹಾರಿಹೋದ ತೆರನಂತಾಯಿತ್ತು.
ನೀ ಕಾಡಿ ಕಾಡಿ ನೋಡುವನ್ನಬರ,
ಎನಗಿದು ವಿಧಿಯೇ ಹೇಳಾ ತಂದೆ ?
ಮುರುವಾರುವನ್ನಬರ,
ಎಮ್ಮೆ ಗಾಳಿಗೆ ಹಾರಿಹೋದ ತೆರನಂತಾಯಿತ್ತು.
ಎನಗೆ ನೀನಾವ ಪರಿಯಲ್ಲಿ ಕರುಣಿಸುವೆಯಯ್ಯಾ ಚೆನ್ನಮಲ್ಲಿಕಾರ್ಜುನಾ ?

Leave a Comment

Your email address will not be published. Required fields are marked *