ಬರಿದೆ ಹೋಯಿತು

ಬರಿದೆ ಹೋಯಿತು ಹೋಯಿತು ಹೊತ್ತು|
ನರಜನ್ಮ ಸ್ಥಿರವೆಂದು ನಾನಿದ್ದೆನೊ ರಂಗ||

ಆಸೆ ಎಂಬುದು ಎನ್ನ ಕ್ಲೇಶಪಡಿಸುತಿದೆ
ಗಾಸಿಯಾದೆನೊ ಹರಿ ನಾರಾಯಣ|
ವಾಸುದೇವನೆ ನಿನ್ನ ಧ್ಯಾನವ ಮಾಡದೆ
ನಾಶವಾಯಿತು ಜನ್ಮ ಮೋಸಹೋದೆನು ಕೃಷ್ಣ||

ಪರರ ಸೇವೆಯ ಮಾಡಿ ಪರರನ್ನೆ ಕೊಂಡಾಡಿ
ಮರುಳುತನದಲಿ ಮತಿಹೀನನಾದೆ|
ನೆರೆ ನಂಬಿದೆನೊ ನಿನ್ನ ಕರುಣದಿಂದಲಿ ಎನ್ನ
ಮರೆಯದೆ ಸಲಹಯ್ಯ ಪುರಂದರವಿಟ್ಠಲ||

                                            —-ಪುರಂದರದಾಸ

Leave a Comment

Your email address will not be published. Required fields are marked *