ಬಂದು ನಿಲ್ಲೋ ದಯಾನಿಧೇ ಬಂದು ನಿಲ್ಲೋ
ಬಂದು ನಿಲ್ಲೋ ನಿನಗೊಂದಿಸುವೆನು ಗೋ
ವಿಂದ ಗೋವಳರಾಯ ಸಂದೇಹಗೊಳಿಸದೆ
ಸದೋಷಕ ನಾನು ಸದಾ ನಿರ್ಮಲ ನೀನು
ಪದೆಪದೆಗೆ ಪೇಳುವುದುಚಿತವಲ್ಲ ||1||
ಮನದೊಳು ಪೊಳದು ಚಿಂತನೆಗೆ ನೆಲೆಯಾಗಿ
ಘನಮಹಿಮನೆ ಮಧ್ವಮುನಿ ಮನ ಮಂದಿರ ||2||
ಕಡೆಗೋಲು ನೇಣಪಿಡಿದ ಪರಮಾನಂದ
ಉಡುಪಿಯ ಶ್ರೀ ಕೃಷ್ಣ ವಿಜಯವಿಠ್ಠಲರೇಯ||3||