ಪೋತರಾಜನಲ್ಲವೋ ನಮ್ಮ ರಂಗ ಪೋತರಾಜನಲ್ಲವೋ
ಭೂತಳದೊಳಜಾತನಾಗಿ ಮೆರೆವ
ಏಕಾರಾರ್ಣವದೊಳು ಎಲ್ಲರ ವೊಡಲೊಳು
ಸಾಕಿಕೊಳ್ಳುತ ಪೊಂದಲಿಟ್ಟುಕೊಂಡು
ಲೋಕನಾಯಕ ಹರಿವಟದೆಲಿಯ ಮೇಲೆ
ಮಾಕಾಂತಿಯ ಕೂಡ ಮಲಗಿದ ಗುಣನಿಧಿ ||1||
ಜಿನಮತದಲಿ ಪುಟ್ಟಿ ದಾನವರು ಸ
ಜ್ಜನಕರ್ಮ ಮಾಡುತಲಿರೆ ವೇಗಾ
ಅನಿಮಿಷರಾಡಿದ ಮಾತಿಗೆ ದೈತ್ಯನ
ಮನವಂಚಿಸಿ ಉಪದೇಶ ಮಾಡಿದ ಹರಿ||2||
ನಂದ ವ್ರಜದಲ್ಲಿ ಪೂತಿನಿ ಶಕಟನ್ನ
ಕೊಂದು ಗಜ ಮಲ್ಲರ ಸವೆದು
ಅಂದವಾಗಿ ಮೆರೆದ ವಿಜಯವಿಠ್ಠಲರೇಯಅಂದು
ದೇವಕಿ ಬಾಲಕನಾಗಿ ತೋರಿದಾ ||3||