ಪಾಲಿಸೊ ಶ್ರೀನಿವಾಸ ಪಾಲಿಸೊ ಶ್ರೀನಿವಾಸ
ಪಾಲಾಬ್ಧಿಶಯನ ಕಾಪಾಲಿಯ ಕಾಯ್ದ ಗೋ
ಪಾಲ ಹರಿ ವಿಶ್ವರೂಪ ಲೋಕಾಧೀಶ
ಪಾಲಯವಾಗೆನ್ನ ಪಾಲಿಲಿದ್ದ ಶಿಶುಪಾಲಕ ಎನ್ನ ಕಾಯನ್ನಾ
ಮನೆ ನಿನಗಾಗಿ ದೇಹಾ ಸುಮ್ಮನೆ ಪೇಳುವುದಿಲ್ಲ ಹ
ಮ್ಮನೆ ಬಿಡಿಸುವುದು ಘಮ್ಮನೆ ಬಂದು ಒಲಿದು ನಿ
ಮ್ಮನೆ ಭಕ್ತರ ಕೂಡ ನೆಮ್ಮನೆ ಕೊಟ್ಟ ಬಲನ ತ
ಮ್ಮನೆ ನಡಿಸುವುದು ತಿಮ್ಮನೆ ಅಜಿತಾನಂತ ನಾ
ಮನೆ ನಾನೆಂಬದರ ಮನೆಯಲ್ಲಿ
ಸಾರ್ವಭೌಮನೆಯಾಗಿ ಪುಟ್ಟಿ ಭೀ
ಮನೆ ಗುರು ನಿತ್ಯಾ ಸಮನೆ ಎಂದು ಪೇಳಿದಾ
ಮನೆಯಲ್ಲಿ ಇಡು ಮಾಮನೆಯುಳ್ಳಾ ಮಹಿಮನೆ ವೆಂಕಟೇಶಾ||1||
ಮನ ದುರ್ವಿಷಯಕೆ ಗಮನವಾಗಿ ಪೋಗುತಿದೆ
ಮನಸಿಜ ಜನಕ ಕರುಣಿಸಿ ಅಧಮನ ಕಾಯಬೇಕು
ಕಾಮನ ಸಂಬಂಧವುಪಶಮನ ಮಾಡು ಬೇಗ ಸುಧಾ
ಮನ ಮಿತ್ರ ಪವಿತ್ರ ಸುಮ್ಮನಸಕೊಡಿಯಾ ವಾ
ಮನ ಮೂರುತಿಯೆ ಮನಸಂಹಾರ ಬಮ್ಮನ ಬಿಡಿಸಿದಾ ಹಿ
ಮನ ಭಾವನೆ ನಿನ್ನ ಮನನಾದಿ ದಿನಯಸ್ತ
ಮಾನ ಪರಿಯಂತ ನೇಮನ ಚಿಂತಿಸುವಂತೆ||2||
ಜನನ ಮರಣ ಶೂನ್ಯಾ ಜನಕಾದ್ಯನಂತಗಂಗ
ಜನಕಾಯಿದಾನಾದಿ ದೈವ ಅ
ಜನನಯ್ಯ ಸ್ವರ್ಣ ಕಾಯಂ ಜಿನೆ ಪುತ್ರಪ್ರಿಯ್ಯಾ ದುಷ್ಟ
ಜನಮರ್ದನಾ ಬಲು ಯೋಜನ ಮೆರೆವ ದೇವ ಸು
ಜನಪಾಲ ಗುಣಶೀಲಾ ಜನುಮ ಜನುಮಕ್ಕು –
ಜನಮತಿ ಕಳೆದು ರಂ
ಜನವಾದಾ e್ಞÁನ ಪುಂಜಿನ ಮಾಡು ದನುಜ ಭಂ
ಜನ ಅತಿ ಭೋಜನ ವಿಜಯವಿಠ್ಠಲ
ನಿರಂಜನ ನಿರ್ಮಳ ಅಂಜನ ಗಿರಿವಾಸಾ ||3||