ನೀನೇ ದಯಾಮಯ

ನೀನೇ ದಯಾಮಯ ಇನ್ನಾರಿರುವರು
ನಿನ್ನಂದದ ಹಿತಕಾರಿ|
ನೋವು ನಲಿವಿನಲಿ ಸಮೀಪ ಬಂಧುವು
ಶೋಕ-ತಾಪ-ಭಯಹಾರಿ||

ಸಂಕಟಪೂರಿತ ಮೋಹಭವಾರ್ಣವ-
ದುತ್ತರಣಕೆ ನೀ ಸಹಕಾರಿ|
ಪ್ರಸನ್ನವಾಗಿಸು ಈ ಬಿರುಗಾಳಿಯ
ರಿಪುದಲ ವಿಪ್ಲವಕಾರಿ||

ಪಾಪದಹನ ಪರಿತಾಪವನಾರಿಸು
ವರ್ಷಿಸು ಶೀತಲವಾರಿ|
ಎಲ್ಲರು ತ್ಯಜಿಸುವ ಅಂತಿಮಕಾಲದಿ
ನೀನೇ ಆಶ್ರಯಕಾರಿ||

                        —ವಚನವೇದ

Leave a Comment

Your email address will not be published. Required fields are marked *