ನಿನ್ನ ನಾ ಮರೆತರೂ ಎನ್ನ ಕೈ ಬಿಡದಿರು

ನಿನ್ನ ನಾ ಮರೆತರೂ ಎನ್ನ ಕೈ ಬಿಡದಿರು ಕರುಣಿಚನ್ನಕೇಶವ ಶ್ರೀ ವೆಂಕಟಾದ್ರಿನಿಲಯ
ಎನ್ನ ತಪ್ಪುಗಳ ನಾನು ಮರೆಯಲೆಂತು ಎನ್ನಬೆನ್ನ ನೋಡಿಕೊಳ್ಳಲಹುದೆ ಎನ್ನಿಂದ

ಮಂಜು ಮರೆಯಾಗುವುದು ಮಾರ್ತಾಂಡ ಮೂಡೆಕಂಜಲೋಚನ ನಿನ್ನ ಪದಕಮಲ ಸ್ಮರಣೆರಂಜಿಸಿ ಮನವನು ಪಾರಾಗಿಪುದು ಪಾಪಗಳಅಂಜಿಕೆಯ ಬಿಡಿಸುತ ಅನುಗ್ರಹಿಪ ಕರುಣಿ ||1||

ದಯೆ ನಿನ್ನದಿರೆ ಭಯ ಎನಗಿಲ್ಲ ಹರಿಮಾಯೆ ಮೋಹಗಳಿಗೆ ಮರುಳಾಗಿಹ ಬೊಂಬೆಜಯವಾಗಿಸಿ ಈ ಜನ್ಮ ಕೃತಾರ್ಥವ ಮಾಡುತೋಯಜಾಕ್ಷ ಶ್ರೀ ನೆಲೆಯಾದಿಕೇಶವರಾಯ||2||

Leave a Comment

Your email address will not be published. Required fields are marked *