ನಾರಾಯಣಾ ನಮೋ ನಾರಾಯಣಾ

ನಾರಾಯಣಾ ನಮೋ ನಾರಾಯಣಾ
ಘೋರ ಸಂಸಾರ ಭವದೂರ ಋಷಿಜನ ಮನೋ-ಹಾರ ಸಾಕಾರ ಸಿರಿಧರ ರೂಪನೆ ನಮೋ

ಉತ್ತಾನಪಾದನ ಅಣುಗಗೆ ಧ್ರುವ ಪದವಿಜತ್ತಯಿಸಿ ಕೊಟ್ಟೆ ಶ್ರೀನಾರಾಯಣಾಉತ್ಕಚದ ಬಾಲೆಯ ಕಡುಲಜ್ಜೆ ಸಭೆಯೊಳಗೆವಿಸ್ತರಿಸಿ ಕಾಯ್ದೆ ಶ್ರೀನಾರಾಯಣಾಕತ್ತರಿಸಿ ನೆಗಳು ನುಂಗಿದ ಕುಮಾರಕನ ತಂ-ದಿತ್ತೆ ಮುನಿವರನಿಗೆ ನಾರಾಯಣಾಚಿತ್ತಜಾರಿ ಕೊಲ್ಲಲಂಬರೀಷ ಭೂಪೋತ್ತಮನ ಕಾಯ್ದೆ ಶ್ರೀನಾರಾಯಣಾ ||1||

ನಕ್ರಂಗೆ ಸಿಲ್ಕಿ ನಡುನೀರೊಳೊದರುವ ಗಜವಚಕ್ರದಿಂ ಕಾಯ್ದೆ ಶ್ರೀನಾರಾಯಣಾಶುಕ್ರನುಪದೇಶವನು ತವೆ ಜರಿದ ವೈಷ್ಣವರಅಕ್ಕರದಿ ಪಾಲಿಸಿದೆ ನಾರಾಯಣಾಶಕ್ರಜಿತುಪಿತ ಸಹೋದರಗೆ ಸ್ಥಿರರಾಜ್ಯವನುಉತ್ಕøಷ್ಟದಿಂ ಕೊಟ್ಟೆ ನಾರಾಯಣಾದುಷ್ಕøತದಿ ಸುತನ ಪೆಸರ್ಗೊಂಡವನ ಕಾಯ್ದೆಯೊ ತ್ರಿ-ವಿಕ್ರಮಾಂಕಿತ ವೀರ ನಾರಾಯಣಾ||2||

ದುರಿತಾಬ್ಧಿ ಕುಂಭಸಂಭವ ದುರಿತಗಿರಿವಜ್ರದುರಿತಮದಗಜಸಿಂಹ ನಾರಾಯಣಾದುರಿತಾಹಿ ವೈನತೇಯ ದುರಿತ ಮೃಗ ವ್ಯಾಘ್ರನೆದುರಿತ ವನದಾವಶಿಖಿ ನಾರಾಯಣಾದುರಿತ ಜೀಮೂತಪವನ ದುರಿತಾಂಧಕಾರ ರವಿದುರಿತ ಲತಾಲವಿತ್ರ ನಾರಾಯಣಾದುರಿತ ಮರ್ದನ ಕಾಗಿನೆಲೆಯಾದಿಕೇಶವನೆದುರಿತ ಬಂಧವ ಪರಿದೆ ನಾರಾಯಣಾ ||3||

Leave a Comment

Your email address will not be published. Required fields are marked *