ನಂಬಿದೇ ನಿನ್ನಯ ಪಾದ ಮುಖ್ಯ ಪ್ರಾಣಾ
ನಂಬಿದೇ ನಿನ್ನಯ ಪಾದಾ
ಡಂಬರ ತೊಲಗಿಸಿ
ಡಿಂಬದೊಳಗೆ ಹರಿಯ ಬಿಂಬ ಪೊಳೆವಂತೆ ಮಾಡೊ
ಇಪ್ಪತ್ತು ಒಂದು ಸಾವಿರ ಐದೊಂದು ನೂರು
ಅಪ್ರತಿಹಂಸಮಂತ್ರ ತಪ್ಪದೆ ದಿನದಿನ
ಒಪ್ಪದಿಂದಲಿ ಭಜಿಸಿ ತಪ್ಪಿಸೋ ಭವವಾ ಸ
ಮೀಪದ ಜೀವ ಕೊ ಅಪ್ಪನಂದದಿ ಪುಣ್ಯ
ವಪ್ಪಂತೆ ಕರುಣಿಸೊ
ಕಪ್ಪುವರ್ಣನ ಕೂಡಪ್ಪಿಸಿ ಪಾಲಿಸೋ ||1||
ಹತ್ತೇಳು ಎರಡಾಯುತ ನಾಡಿಯೊಳು
ಸುತ್ತಿ ಸೂತ್ರವ ಮಾರುತಾ
ಉತ್ತರÀ ಪಾಲಿಸೋ ಉತ್ಕ್ರಮಣದಲ್ಲಿ ನೆತ್ತಿಯದ್ವಾರದಿಂದ
ಎತ್ತಮರಿಯಲೀ ಸದದೆ ತತ್ತುವರೊಳು ಜೀವೋ
ತ್ತಮನೆ ಸತ್ ಚಿತ್ ಎನಗೆ ಕೊಡು
ಉತ್ತರ ಧರಿಸೋ ||2||
ಅಂತರಂಗದಿ ಉಸುರಾ ಹೊರಗೆ ಬಿಟ್ಟು
ಅಂತರಂಗಕ್ಕೆ ಸೇರುವ ಪಂಥದೊಳು ನೀನೆ
ಕಂತುಜನಕನಲ್ಲಿ ಮಂತ್ರಿ ಎನಿಸಿ ಸರ್ವ
ರಂತರ್ಯಾಮಿ ಆಗಿ
ನಿಂತು ನಾನಾಬಗೆ ತಂತು ನಡಿಸುವ
ಹೊಂತಕಾರಿ ಗುಣವಂತ ಬಲಾಢ್ಯ ||3||
ಪಂಚಪರಣ ರೂಪನೆ ಸತ್ವ ಕಾಯಾ
ಪಂಚೇಂದ್ರಿಯಗಳ ಲೋಪನೆ
ಮುಂಚಿನ ಪರಮೇಷ್ಟಿ ಸಂಚಿತಾಗಾಮಿ ಬಿಡಿಸಿ
ಕೊಂಚ ಮಾಡೋ ಪ್ರಾರಬ್ಧ ವಂಚನೆ ನೆನೆದೊ
ಅಂಚಗಂಚಿಗೆ ಪರಪಂಚವೆ ಓಡಿಸಿ
ಪಂಚವಕ್ತ್ರ ಹರಿ ಮಂಚದ ಗುರುವೇ ||4||
ಯೋಗಾಸನದೊಳಿಪ್ಪ ಯಂತ್ರೋದ್ಧಾರಾ
ಭಾಗವತರಪ್ಪಾ ಯೋಗಿಗಳೀಶಾ ವ್ಯಾಸಾ
ಯೋಗಿಗೊಲಿದ ವ್ಯಾಸಾ ಶ್ರೀ
ತುಂಗಭದ್ರಾ ವಾಸಾ ಬಾಗುವೆ ಕೊಡು ಲೇಸಾ
ಶ್ರೀಗುರು ವಿಜಯವಿಠ್ಠಲನ ಪಾದಕೆಬಾಗುವ ಭವದೂರ ಜಾಗರ ಮೂರುತಿ||5||