ನಂಬಿದೆನೊ ನಂಬಿದೆನೊ ಅಂಬುಜಾಕ್ಷ

ನಂಬಿದೆನೊ ನಂಬಿದೆನೊ ಅಂಬುಜಾಕ್ಷ
ತೊಂಬಲಿಗೆ ಹಂಬಲಿಸಿ ಹಾರೈಸಿದೆ ನಿನ್ನ

ಮೊದಲುಂಡ ಪಾಪದಲಿ ಕಳೆಗುಂದಿ ಕಳೆಗುಂದಿ
ಮುದದಿಂದ ನಿತ್ರಾಣನಾದೆನಯ್ಯಾ
ಪದುಮನಾಭನೆ ನಿನ್ನಭಯದೊಂಬಲನಿತ್ತು
ವದನ ಚೇತನನಾಗುವಂತೆ ದಯಮಾಡೊ ||1||

ವಿಷವ ಸೇವಿಸಿದ ತರುಣನಂತೆ
ಮೆಲವು ಭಾವಿಸದೆ ಬೀಳುತೀ ನೀ ನೆಲೆಗಾಣದೆ
ಬಿಸಿಜಾಕ್ಷ ನೀನೆ ಕೃಪಾಳು ಎಂದೆಂದಿಗೆ
ರಸ ಸುರಿವ ಸುರಿವ ಬಾಯದೊಂಬಲಾನಿತ್ತು ಸಲಹೊ||2||

ಆವದಾದರುವಲ್ಲೆ ಅನಿಮಿತ್ತ ಬಂಧು ಕೇಳು
ಜೀವವೇ ನಿನ್ನ ಪಾದದಾಧೀನವೋ
ಶ್ರೀವಧುರಮಣ ನಮ್ಮ ವಿಜಯವಿಠ್ಠಲ ನೀನೆ ದೇವ ಯನಗ
ಹುದು ತೊಂಬಲನಿತ್ತು ಪೊರಿಯೊ ||3||

Leave a Comment

Your email address will not be published. Required fields are marked *