ಘನವ ಕಂಡೆ, ಅನುವ ಕಂಡೆ,
ಆಯತ ಸ್ವಾಯತ ಸನ್ನಿಹಿತ ಸುಖವ ಕಂಡೆ.
ಅರಿವರಿದು ಮರಹ ಮರೆದೆ.
ಕುರುಹಿನ ಮೋಹ ಮೊರೆಗೆಡದೆ
ಚೆನ್ನಮಲ್ಲಿಕಾರ್ಜುನಾ, ನಿಮ್ಮನರಿದು ಸೀಮೆಗೆಟ್ಟೆನು.
ಘನವ ಕಂಡೆ, ಅನುವ ಕಂಡೆ,
ಆಯತ ಸ್ವಾಯತ ಸನ್ನಿಹಿತ ಸುಖವ ಕಂಡೆ.
ಅರಿವರಿದು ಮರಹ ಮರೆದೆ.
ಕುರುಹಿನ ಮೋಹ ಮೊರೆಗೆಡದೆ
ಚೆನ್ನಮಲ್ಲಿಕಾರ್ಜುನಾ, ನಿಮ್ಮನರಿದು ಸೀಮೆಗೆಟ್ಟೆನು.