ಕೀಡಿ ತುಂಬಿಯ ಹಂಬಲದಿಂದ ತುಂಬಿಯಾಗಿ

ಕೀಡಿ ತುಂಬಿಯ ಹಂಬಲದಿಂದ ತುಂಬಿಯಾಗಿ
ತನ್ನ ಬಿಡಲುಂಟೆ ಅಯ್ಯಾ ?
ಆನು ನಿಮ್ಮ ನೆನೆದು
ಎನ್ನ ಕರತುಂಬಿ, ಎನ್ನ ಮನತುಂಬಿ, ಎನ್ನ ಭಾವತುಂಬಿ,
ಮತ್ತಿಲ್ಲದೆ ನಿನ್ನ ಕೂಟದ ಸವಿಗಲೆಯನೆಂತು ಕಾಣುವೆನಯ್ಯಾ ಚೆನ್ನಮಲ್ಲಿಕಾರ್ಜುನಾ ?

Leave a Comment

Your email address will not be published. Required fields are marked *