ಕಮಲೆ ನಿನ್ನಯ ಪಾದ ಕಮಲದಲ್ಲೆನಗೆ
ವಿಮಲ ಮತಿಯನಿತ್ತು ಅಮಲನ್ನ ಮಾಡಿಸೇ
ಗಜರಾಜ ಗಮನೆಯೆ ತ್ರಿಜಗದ್ವಂದ್ಯಳೆಂದು
ಭಜಿಸಿ ನಿನ್ನಯ ಪಾದಾಂಬುಜವ ಆಶ್ರೈಸಿದೇ ||1||
ಅಷ್ಟ ಸೌಭಾಗ್ಯ ವಿಶಿಷ್ಟವ ಕೊಟ್ಟು
ಕಷ್ಟವ ತಿಳಿದು ಸಂತುಷ್ಟನ ಮಾಡಮ್ಮ ||2||
ಶ್ರೇಷ್ಠನ್ನ ಮಾಡು ಉತ್ಕøಷ್ಟನವನಿತ್ತು
ಶಿಷ್ಟನೆಂದೆನಿಸಿ ಶ್ರೀಕೃಷ್ಣನ್ನ ರಾಣಿ||3||
ಅಜಭವ ಮೊದಲಾದ ದ್ವಿಜರಿಂದ ವಂದಿತಳೆ
ಭಜಿಸಿ ನಿನ್ನಯ ಪಾದಾಂಬುಜವ ಆಶ್ರೈಸಿದೆ ||4||
ದ್ವಿಜರಾಜಗಮನಳೆ ಭುಜಗಶಯನನಾದವಿಜಯವಿಠ್ಠಲನಂಘ್ರಿರಜವ ಧರಿಸುವೆ ||5||