ಏನು ಕಾರಣ ಮಲಗಿದಿಯೊ
ಶ್ರೀನಾಥ ರಘುಕುಲೋದ್ಭವ ದರ್ಭಶಯನಾ
ಸೀತೆ ಪೋದಳು ಎಂದು ಚಿಂತೆಯಲಿ ಮಲಗಿದೆಯೊ
ಸೇತುಗಟ್ಟುವದು ಅಸಾಧ್ಯವೆಂದು ಮಲಗಿದೆಯಾ
ಕೋತಿಗಳ ಕೈಯಲೆ ರಣವಾಗದೆಂದು ಮಲಗಿದೆಯಾ
ಪಾತಕ ಹರದೈತ್ಯ ಭಂಜಾ ತಿಳುಪುವದು
ಜ್ಯೋತಿರ್ಮಯರೂಪ ದರ್ಭಶಯನಾ||1||
ವನವಾಸ ತಿರಗಲಾರೆನೆಂದು ಮಲಗಿದೆಯೊ
ವನಧೀಶ ಮಾರ್ಗವನು ಕೊಡನೆಂದು ಮಲಗಿದೆಯೊ
ದನುಜ ಬಲ್ಲಿದನೆಂಬೊ ವ್ಯಾಕುಲದಿ ಮಲಗಿದೆಯೊ
ಜನನ ಮರಣರಹಿತ ರಾಮ ತಿಳುಹುವದು
ಹನುಮ ವಂದಿತ ಪಾದ ಶ್ರೀದರ್ಭಶಯನಾ ||2||
ಅನಿಲಾರಿ ಅಹರಗೆ ಕರುಣಿಸಿ ಮಲಗಿದೆಯೊ
ವನಜ ಸಂಭವಗೆ ನೀ ಒಲಿಯ ಬಂದು ಮಲಗಿದಿಯೊ
ಮುನಿಗಳು ಸ್ತೋತ್ರವ ಮಾಡಲು ಹಿಗ್ಗಿ ಮಲಗಿದೆಯೊ
ಜನನಾಥ ಜಾನಕಿಕಾಂತ ತಿಳುಪುವದು
ಎನಗೊಲಿದ ವಿಜಯವಿಠ್ಠಲ ದರ್ಭಶಯನಾ ||3||