ಏನು ಕಾರಣ ಬಂದೆ ಗಂಗೆ |
ನಾನೇನು ಪುಣ್ಯವನು ಮಾಡಿದವನಲ್ಲ
ಕಾಸೀಪುರದಿಂದಲಿ ದೇಶ ನೋಡಲು ಬಂದ್ಯೋ |
ಬೀಸಿ ಬಿಸುಟುವಂಥ ಅಸ್ಥಿಗಾರದೆ ಒಂದ್ಯೋ |
ದಾಸರ ಮಹಿಮೆಯನು ನೋಡುವೆನೆಂದು ಬಂದ್ಯೋ |
ದೋಷವರ್ಜಿತ ವಾರಣಾಸಿ ಕಡಿಯದಲೆ |
ಲೇಸಾಗಿ ತಿಳಿಪುವದು ಭೀಷ್ಮನ ಜನನೀ ||1||
ತಿಲನೀರು ಕುಡಿದು ಧರಿಸಲಾರದೆ ಬಂದ್ಯೋ |
ಮಲಜನರ ದೋಷವನು ಕಳೆವೆನೆಂದು ಬಂದ್ಯೋ |
ಕಲಿಯುಗಕೆ ಈ ಕೃಷ್ಣಾ ಅಧೀನಳೆಂದು ಬಂದ್ಯೋ |
ಸುಲಭ ತ್ರಿದದೇಶ್ವರಿ ಗಂಗೆ ತಡೆಯದಲೆ |
ನಿಲಜಾಲೆ ತಿಳಿಪುವದು ನೀರಜ ನಯನೇ ||2||
ಸುರರ ನಿತ್ಯ ಕರ್ಮಗಳು ನೋಡಲಿ ಬಂದ್ಯೋ |
ಮಜ್ಜನವ ಮಾಡಿಸಿ ಎನ್ನ ಪೊರಿಯಲು ಬಂದ್ಯೋ |
ಮೂಜಗದೊಳು ಪೆಸೆರಾಗಿಪ್ಪೆನೆಂದು ಬಂದ್ಯೋ |
ನಿರ್ಜನ ತಟನಿ ನಿರ್ಗುಣಸಾಂದ್ರೆ ತಡಿಯದಲೆ |
ನಿಜವ ತಿಳುಪುವದು ವಿಜಯವಿಠ್ಠಲಸುತೆ ||3||