ಎಲೆ ದೇವಾ, ಸಕಲ ಕರಣಂಗಳ ಉಪಟಳಕ್ಕಂಜಿ
ನಿಮ್ಮ ಶರಣರ ಮರೆಯೊಕ್ಕು ಕಾರುಣ್ಯಮಂ ಪಡೆದು,
ಬಂದು ನಿಮ್ಮ ಶ್ರೀ ಮೂರ್ತಿಯ ಕಂಡೆ.
ಇನ್ನು ಎನ್ನ ನಿಮ್ಮೊಳಗೆ ಐಕ್ಯವ ಮಾಡಿಕೊಳ್ಳಾ ಚೆನ್ನಮಲ್ಲಿಕಾರ್ಜುನಾ.
ಎಲೆ ದೇವಾ, ಸಕಲ ಕರಣಂಗಳ ಉಪಟಳಕ್ಕಂಜಿ
ನಿಮ್ಮ ಶರಣರ ಮರೆಯೊಕ್ಕು ಕಾರುಣ್ಯಮಂ ಪಡೆದು,
ಬಂದು ನಿಮ್ಮ ಶ್ರೀ ಮೂರ್ತಿಯ ಕಂಡೆ.
ಇನ್ನು ಎನ್ನ ನಿಮ್ಮೊಳಗೆ ಐಕ್ಯವ ಮಾಡಿಕೊಳ್ಳಾ ಚೆನ್ನಮಲ್ಲಿಕಾರ್ಜುನಾ.