ಎಂಥ ಕೀರುತಿ ಪೊತ್ತುವೆರಡು ಪಾದ – ಶ್ರೀ-ಕಾಂತ ಬಾಡದ ರಂಗ ಕರುಣಿ ದೇವೋತ್ತುಂಗ
ಕುಬ್ಜ ಬ್ರಾಹ್ಮಣನಾಗಿ ಕುಂಭಿನಿ ಈರಡಿ ಮಾಡಿಹೆಜ್ಜೆಯೊಳಡಗಿಟ್ಟ ಹೆಚ್ಚಿನ ಪಾದಅರ್ಜುನನ ಶಿರವ ಕಾಯಲು ಬಾಣದಿಂದ ರಥವಗುಜ್ಜೆಯಲೂರಿ ನೆಲಕೊತ್ತಿದ ಪಾದ ||1||
ಶಾಪದಿ ಬಹುಕಾಲ ಅಹಲ್ಯೆಯು ಶಿಲೆಯಾಗೆಆ ಪ್ರಾಣ ನಿರ್ಮಿಸಿದ ಅಧಿಕ ಪಾದಗೋಪಿ ಕಟ್ಟಿದ ಒರಳ ಗೊಲ್ಲಗೇರಿಗೆಳೆಯುತಆ ಫಣಿಯ ತಲೆಯ ಮೇಲಾಡಿದ ಪಾದ ||2||
ಕುರುರಾಯನೇಳದೆಯೆ ಕುಳಿತ ಸಿಂಹಾಸನದಿಉರುಳಿಸಿಬಿಟ್ಟಂತ ಉನ್ನತ ಪಾದಮರಕತ ನಗರಿಯ ಬಾಡ ಬಂಕಾಪುರದರಸು ಸಿರಿಯಾದಿಕೇಶವನ ಶ್ರೀಪಾದ||3||