ಊರಿಗೆ ಬಂದರೆ ದಾಸಯ್ಯ – ನಮ್ಮಕೇರಿಗೆ ಬಾ ಕಂಡ್ಯ ದಾಸಯ್ಯ
ಕೈಲಿ ಕೋಲು ಕೊಳಲು ದಾಸಯ್ಯಕಲ್ಲಿಗೆ ವರವಿತ್ತೆ ದಾಸಯ್ಯಮಲ್ಲನ ಮರ್ದಿಸಿ ಮಾವನ ಮಡುಹಿದನೀಲಮೇಘಶ್ಯಾಮ ದಾಸಯ್ಯ ||1||
ಕೊರಳೊಳು ವನಮಾಲೆ ದಾಸಯ್ಯ – ಬಲುಗಿರಿಯನು ನೆಗಹಿದೆ ದಾಸಯ್ಯಇರುಳು ಹಗಲು ನಿನ್ನ ಕಾಣದೆ ಇರಲಾರೆಮರುಳು ಮಾಡುವಂಥ ದಾಸಯ್ಯ|| 2||
ಆದಿನಾರಾಯಣ ದಾಸಯ್ಯಮೋದದೊಂದು ಸಾಸಿರ ನಾಮದ ದಾಸಯ್ಯಮೇದಿನಿಯೊಳು ಪುಟ್ಟಿ ಗೋವ್ಗಳ ಕಾಯ್ದಆದಿಕೇಶವರಾಯ ದಾಸಯ್ಯ||3||