ಈ ಪರಿಯ ಸೊಬಗಾವ ದೇವರಲಿ ನಾ ಕಾಣೆಗೋಪಿದೇವಿಯ ತನಯ ಗೋಪಾಲ ಬಾಲಗಲ್ಲದೆ
ದೊರೆಯ ತನದಲಿ ನೋಡೆ ಧರಣಿ ಜಾತೆಯ ರಮಣಸಿರಿಯ ತನದಲಿ ನೋಡೆ ಶ್ರೀಕಾಂತನುಹಿರಿಯ ತನದಲಿ ನೋಡೆ ಸರಸಿಜೋದ್ಭವನ ಪಿತನುಗುರುವು ತನದಲಿ ನೋಡೆ ಆದಿಗುರುವು ||1||
ಪಾವನತ್ವದಿ ನೋಡೆ ದೇವಿ ಗಂಗಾಜನಕದೇವತ್ವದಲಿ ನೋಡೆ ದಿವಿಜರೊಡೆಯಲಾವಣ್ಯದಲಿ ನೋಡೆ ಲೋಕ ಮೋಹನ ಪಿತನುಜವ ಧೈರ್ಯದಲಿ ನೋಡೆ ಅಸುರಾಂತಕ||2||
ಗಗನದಲಿ ಸಂಚರಿಪ ವೈನತೇಯ ವಾಹನಜಗವನು ಪೊತ್ತಿರ್ಪ ಶೇಷ ಶಯನಕಾಗಿನೆಲೆಯಾದಿಕೇಶವರಾಯಗಲ್ಲದೆಮಿಗಿಲು ದೈವಗಳಿಗೀ ಭಾಗ್ಯಮುಂಟೆ ||3||
ಈ ಕೃತಿ ಪುರಂದರದಾಸರದು.
ಕನಕದಾಸರದಲ್ಲ ಅಲ್ಲವೇ
ಸ್ವಲ್ಪ ಗೊಂದಲವಿದೆ. ಸಾಹಿತ್ಯದಲ್ಲಿ ಸಾಮ್ಯತೆಯ ಜೊತೆಗೆ ಸ್ವಲ್ಪ ವ್ಯತ್ಯಾಸವೂ ಇದೆ. ಕರ್ನಾಟಕ ಸರ್ಕಾರದ ಅಧಿಕೃತ ದಾಸ ಸಾಹಿತ್ಯದಿಂದ ಆಯ್ದದ್ದು.
ಹೌದು, ಈ ಕೃತಿ ಪುರಂದರ ದಾಸರ ರಚನೆ.
ಅಲ್ಲ ಕನಕದಾಸರದು , ಸಾಹಿತ್ಯ ಆಡು ಮಾತಿನಲ್ಲಿದ್ದರೆ ಪುರಂದರದಾಸರದು, ಗ್ರಾಂಥಿಕ ಭಾಷೆಯಿದ್ದರೆ ಕನಕದಾಸರದು ವ್ಯತ್ಯಾಸವನ್ನು ಈಗೆ ಕಂಡು ಹಿಡಿಯಬಹುದು