ಇದು ನಿನಗೆ ಬಲು ಚಂದವಾಗಿದೇನೋ

ಇದು ನಿನಗೆ ಬಲು ಚಂದವಾಗಿದೇನೋ |
ಬಾದರಾಯಣನ ಮೆಚ್ಚಿಸಿ ಸೇವೆ ಮಾಡಬೇ |

ಕಾದರೂ ಮತ್ತಾವ ಪರಿಯಿಲ್ಲವೇ |
ಈ ಧರೆ ಮನುಜರಿಗೆ ಆವಾವ ಕಾಲಕ್ಕೆ
ಭೋದವಾಗದಂತೆ ಇದ್ದದ್ದೇನು ಬಗೆ ||1||

ಸಂಪುಟಾಕಾರವನು ಧರಿಸಿ ಅಲಂಕಾರ |
ಸಂಪತ್ತಿನಿಂದ ಯತಿಗಳ ಕೈಯ್ಯಲಿ |
ಸೊಂಪಾಗಿ ಮಿಗೆ ಪೂಜೆ ಕೊಳುತ ಪೊಗಳಿದ ಜನಕೆ |
ತಂಪಾಗಿ ಗುರು ಶ್ರೀ ಮದಾಚಾಯರ್ಸ ||2||

ಪೆಟ್ಟಿಗೆಯಂದದಲಿ ಒಪ್ಪುವನೆಂದದಕೆ |
ದಿಟ್ಟವಾಯಿತು ದಾಸರು ನುಡಿದುದು |
ವಿಷ್ಣುತೀರ್ಥರಿಂದ ಆರಿಸಿ ಬಂದ | ವಿಜಯವಿಠ್ಠಲ ವೇದ |
ವ್ಯಾಸನಂಘ್ರಿವಾರಿಜ ಮಧುಪಾ||3||

Leave a Comment

Your email address will not be published. Required fields are marked *