ಆವ ರೋಗವು ಎನಗೆ

ಆವ ರೋಗವು ಎನಗೆ ದೇವ ಧನ್ವಂತ್ರಿ|
ಸಾವಧಾನದಿ ಎನ್ನ ಕೈಪಿಡಿದು ನೋಡಯ್ಯ||

ಹರಿಮೂರ್ತಿಗಳು ಎನ್ನ ಕಂಗಳಿಗೆ ಕಾಣಿಸವು
ಹರಿಯ ಕೀರ್ತನೆಯು ಕೇಳಿಸದು ಕಿವಿಗೆ|
ಹರಿಮಂತ್ರ ಸ್ತೋತ್ರ ಬಾರದು ಎನ್ನ ನಾಲಿಗೆಗೆ
ಹರಿಪ್ರಸಾದವ ಜಿಹ್ವೆ ಸವಿಯದಯ್ಯ||

ಹರಿಪಾದ ಸೇವೆಗೆ ಹಸ್ತಗಳು ಚಲಿಸವು
ಗುರುಹಿರಿಯರಂಘ್ರಿಗೆ ಶಿರ ಬಾಗದು|
ಹರಿಯ ನಿರ್ಮಾಲ್ಯವಾಘ್ರಾಣಿಸದು ನಾಸಿಕವು
ಹರಿಯಾತ್ರೆಗಳಿಗೆನ್ನ ಕಾಲೇಳದಯ್ಯ||

ಅನಾಥಬಂಧು ಗೋಪಾಲವಿಟ್ಠಲರೇಯ
ಎನ್ನ ಭಾಗದ ವೈದ್ಯ ನೀನೆ ನೀನೇ|
ಅನಾದಿಕಾಲದ ಭವರೋಗ ಕಳೆಯಯ್ಯ
ನಾನೆಂದಿಗೂ ಮರೆಯೆ ನಿನ್ನ ಉಪಕಾರ||

                                          ——-ಗೋಪಾಲದಾಸ

Leave a Comment

Your email address will not be published. Required fields are marked *