ಅಭಯ ಗಿರಿಯವಾಸ ಶ್ರೀನಿವಾಸನು ನಮಗೆ |
ಶುಭವೀವ ನಿರುತ ಮಂದಹಾಸನೊ
ಧೇನಿಪರ ಮನಕೆ ಚಿಂತಾಮಣಿಯೋ ಸ್ವಾಮಿ |
ನೀನೆ ಗತಿಯೆಂಬರಿಗೆ ಹೊಣೆಯೋ
e್ಞÁನಮಯ ಸಂದಣಿಯೊ ಪುಣ್ಯ
ಕಾನನ ನಿವಾಸ ಸುರಖಣಿಯೊ ||1||
ಶರಣರಿಗೆ ವಜ್ರ ಪಂಜರನೋ ದುಷ್ಟ
ದುರುಳ ದೈತ್ಯರಿಗೆ ಝರ್ಝರನೊ
ದುರಿತ ಕದಳಿಗೆ ಕುಂಜರನೊ ಸ್ವಾಮಿ
ಉರಗತಲ್ಪನಾದ ಸಿರಿವರನೊ ||2||
ಪರಮೇಷ್ಟಿ ಶಿವರೊಳಗಿಪ್ಪನೋ ಇಂದು
ಮರುತನ ಪೆಗಲೇರಿ ಬಪ್ಪನೊ
ಶರಣರಿಗೊರವೀಯೆ ತಪ್ಪನೋ ನಮ್ಮ
ಸಿರಿ ವಿಜಯವಿಠ್ಠಲ ತಿಮ್ಮಪ್ಪನೊ ||3||