ದೇವ ಬಂದಾ ನಮ್ಮ

ದೇವ ಬಂದಾ ನಮ್ಮ ಸ್ವಾಮಿ ಬಂದಾನೋ
ದೇವರ ದೇವ ಶಿರೋಮಣಿ ಬಂದನೋ||

ಉರಗಶಯನ ಬಂದ ಗರುಡಗಮನ ಬಂದ
ನರಗೊಲಿದವ ಬಂದ ನಾರಾಯಣ ಬಂದ||

ಮಂದರೊದ್ಧರ ಬಂದ ಮಾಮನೋಹರ ಬಂದ
ಬೃಂದಾವನಪತಿ ಗೋವಿಂದ ಬಂದನೋ|
ನಕ್ರಹರನು ಬಂದ ಚಕ್ರಧರನು ಬಂದ
ಅಕ್ರೂರಗೊಲಿದ ತ್ರಿವಿಕ್ರಮ ಬಂದನೋ||

ಪಕ್ಷಿವಾಹನ ಬಂದ ಲಕ್ಷ್ಮಣಾಗ್ರಜ ಬಂದ
ಅಕ್ಷಯಫಲದ ಶ್ರೀಲಕ್ಷ್ಮೀರಮಣ ಬಂದ|
ನಿಗಮಗೋಚರ ಬಂದ ನಿತ್ಯತೃಪ್ತನು ಬಂದ
ನಗೆಮುಖ ಪುರಂದರವಿಟ್ಠಲ ಬಂದನೋ||

                                           —-ಪುರಂದರದಾಸ

Leave a Comment

Your email address will not be published. Required fields are marked *